ಆಸ್ಪತ್ರೆಯ ಎಡವಟ್ಟು ಘಟನೆಗಳನ್ನು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಆದರೆ ಇದೀಗ ನಡೆದ ಘಟನೆ ಆಸ್ಪತ್ರೆಗೆ ದಾಖಲಾಗಲು ಬೆಚ್ಚಿ ಬೀಳುವಂತಿದೆ.
Year: 2024
2024ರ ಇಂಟರ್‌ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಯಾರೆಂಬುದು ಘೋಷಣೆಯಾಗಿದೆ.
ಸಬ್‌ರಿಜಿಸ್ಟ್ರರ್ ಕಚೇರಿಯಲ್ಲಿನ ತಾಂತ್ರಿಕ ದೋಷ ಮತ್ತು ಇ ಖಾತೆಯಲ್ಲಿನ ಲೋಪವನ್ನು ಸರಿಪಡಿಸುವಲ್ಲಿ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಮಾಡಿದ್ದಾರೆ.
ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ತಲುಪುವ ಮೊದಲೇ ಹೊಗೆ ತುಂಬಿದ ವಾರ್ಡ್ ಕಿಟಕಿಗಳನ್ನು ಒಡೆದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ
ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕವನ್ನು ಏಕಾಏಕಿ ಶೇ. 50-60ರಷ್ಟು ಏರಿಸಿದ್ದನ್ನು ವಿರೋಧಿಸಿ ಎಬಿವಿಪಿ ವತಿಯಿಂದ ಕೊಣಾಜೆಯಲ್ಲಿರುವ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಇಂದಿರಾ ಗಾಂಧಿ ಜನ್ಮ ದಿನ ಆಚರಣಾ ಸಮಿತಿ ನೇತೃತ್ವದಲ್ಲಿ ಭಾರತ ದೇಶದ ಮೊದಲ ಮಹಿಳಾ ಪ್ರಧಾನಿ,ಉಕ್ಕಿನ ಮಹಿಳೆ ದಿ ||ಇಂದಿರಾ ಗಾಂಧಿಯವರ ಜನ್ಮ ದಿನ ಪ್ರಯುಕ್ತ
ಮರದ ತುಂಡುಗಳನ್ನು ಲೋಡ್ ಮಾಡುತ್ತಿದ್ದ ವೇಳೆ ಚಾಲಕ ಏಕಾಏಕಿ ಲಾರಿ ಚಲಾಯಿಸಿದ ಪರಿಣಾಮ ಮರದ ತುಂಡು ಬಿದ್ದು ವ್ಯಕ್ತಿಯೋರ್ವನ ಸಾವಿಗೆ ಕಾರಣನಾದ ಚಾಲಕನಿಗೆ ಪುತ್ತೂರು ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ರಾಜ್ಯದಲ್ಲಿ ಮದ್ಯ ಮಾರಾಟಗಾರರಿಂದ ಹಣ ವಸೂಲಿ ಹಾಗೂ ಅಬಕಾರಿ ಇಲಾಖೆಯಲ್ಲಿನ ಮಿತಿ ಮೀರಿದ ಭ್ರಷ್ಟಾಚಾರವನ್ನು ಸರಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ಮದ್ಯ ಮಾರಾಟಗಾರರರು ನ.20ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಸಮಾನ ಮನಸ್ಕ ಒಕ್ಕಲಿಗ ಯುವಕರು ಬಡ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ಬಲವರ್ಧನೆ ಉದ್ದೇಶದಿಂದ ನೂತನವಾಗಿ ಪ್ರಾರಂಭಿಸಲಾದ ಒಕ್ಕಲಿಗ ಗೌಡ ಸೇವಾವಾಹಿನಿ ದ.ಕ., ಕರ್ನಾಟಕ ಟ್ರಸ್ಟ್ ನ ಚೊಚ್ಚಲ ಸಹಾಯಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ನ. 16ರಂದು ಆದಿಚುಂಚನಗಿರಿಯ ಮಂಗಳೂರಿನ ಕಾವೂರು ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು ಈ ನೆರವಿನ ಹಸ್ತದ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸೇವಾ ಸಂಘದ 56ನೇ ವಾರ್ಷಿಕೋತ್ಸವ ಮತ್ತು ಆಂಜನೇಯ ಮಹಿಳಾ ಯಕ್ಷಗಾನ ಸಂಘದ 20ನೇ ವರ್ಷಾಚರಣೆಯನ್ನು ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಡಿಸೆಂಬರ್ 25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಆಚರಿಸಲು ಸಿದ್ಧತಾ ಸಭೆಯು ಪುತ್ತೂರು ಪರ್ಲಡ್ಕ ಅಗಸ್ತ್ಯ ದಲ್ಲಿ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆಯಲ್ಲಿ ಜರಗಿತು.