ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಮರ್ಹೂಂ ರಮಳಾನ್ ಅಝ್ಹರಿಯವರ ಕುಟುಂಬಕ್ಕೆ ಕಾಜೂರು ಪೆರ್ದಾಡಿ ನಲ್ಲಿ ಪುನರ್ ನಿರ್ಮಾಣ ಗೊಂಡ ಮನೆ ಕೀ ಹಸ್ತಾಂತರ ನೇತೃತ್ವ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ನೆರವೇರಿಸಿದರು.
Year: 2024
ರೋಟರಿ ಕ್ಲಬ್ ಪುತ್ತೂರು ಆಶ್ರಯದಲ್ಲಿ 2024-25ನೇ ಸಾಲಿನ ರೋಟರಿ ವಲಯ 5ರ ಒಂದು ದಿನದ ರೈಲಾ ಕಾರ್ಯಕ್ರಮ ಡಿ. 1ರಂದು ಬೆಳಿಗ್ಗೆ 8.30ರಿಂದ ತೆಂಕಿಲ ಒಕ್ಕಲಿಗ ಸಭಾಭವನದ ಚುಂಚಶ್ರೀ ಹವಾನಿಯಂತ್ರಿತ ಸಭಾಭವನದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ರಾಜ್ಯಮಟ್ಟದ ವಸ್ತು ಪ್ರದರ್ಶನ ಮಂಟಪದಲ್ಲಿ ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ಸಂಭ್ರಮದ 15ನೇ ಸರಣಿ ತಾಳಮದ್ದಳೆ “ಶರಸೇತುಬಂಧ ಜರಗಿತು.
ಪೊಲೀಸ್ ಠಾಣೆಗೆ ದೂರು ಕೊಡಲು ಬರುವ ಮಂದಿಯನ್ನು ಗೌರವದಿಂದ ಕಾಣಬೇಕು ಮತ್ತು ಅವರಿಗೆ ಠಾಣೆಯಲ್ಲೇ ಚಾ,ತಿಂಡಿಯನ್ನು ಕೊಡಬೇಕು ಇದಕ್ಕಾಗಿ ಪ್ರತೀ ಠಾಣೆಗೂ ಒಂದು ಲಕ್ಷ ವಿಶೇಷ ಅನುದಾನವನ್ನು ಗೃಹ ಇಲಾಖೆ ನೀಡಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿರುವಾಗಲೇ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವ ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ
ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್ ಕಳ್ಳತನವಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ನಡೆದಿದೆ.
ಉಗ್ರ ನಿಗ್ರಹ ದಳದ ಗುಜರಾತ್ ಪಡೆಯು ಗುತ್ತಿಗೆ ಕೆಲಸಗಾರನನ್ನು ಬಂಧಿಸಿದ್ದು, ಆತ ಪಾಕಿಸ್ತಾನದ ಏಜೆಂಟ್ ಗೆ ಭಾರತೀಯ ಕೋಸ್ಟ್ ಗಾರ್ಡ್ (ICG) ಹಡಗುಗಳ ಚಲನವಲನದ ಬಗ್ಗೆ ಮಾಹಿತಿ ರವಾನಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ತೂರು ಆದರ್ಶ ಆಸ್ಪತ್ರೆ ಬಳಿ ನಿವಾಸಿ ಗುರುಪ್ರಸಾದ್ ದೇವಾಡಿಗ (45) ಅವರು ಇಂದು ನಿಧನರಾಗಿದ್ದಾರೆ.
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಬೋಳಾರ್ ಗುಡ್ಡೆ ಕಲಾಯಿಬೈಲ್ ನಿವಾಸಿ, ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯ ಲಾರೆನ್ಸ್ ಡೆಸಾರವರ ಪತ್ನಿ, ಜುಲಿಯಾನ ಹೆಲೆನ್ ರೆಬೆಲ್ಲೋ ಡೆಸಾ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಕಲ್ಲೇರಿ ಅಂಗಡಿ ಗಣೇಶ್ ರವರ ತಮ್ಮ ಸುರೇಶ್ ಎಂಬುವವರು ನವೆಂಬರ್. 26 ರಂದು ಮನೆಯಿಂದ ಕಾಣೆಯಾಗಿದ್ದರು.