ಜೈಲರ್ ಸಿನಿಮಾದ ಹಾಡಿಗೆ ಮೈ ಬಳುಕಿಸಿದ್ದ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ ಅವರು ಇದೀಗ ಮತ್ತೊಂದು ಮೈಲುಗಲ್ಲಿನತ್ತ ಹೆಜ್ಜೆ ಹಾಕಿದ್ದಾರೆ. ಆಗಸ್ಟ್ 15ರಂದು ತೆರೆ ಕಾಣಲಿರುವ “ಸ್ತ್ರೀ” ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ‘ಆಜ್…
Month: July 2024
ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಬೈಯ್ಯುವವರೇ ಹೆಚ್ಚು. ಆದರೆ ಇದೀಗ ಆತ್ಮಹತ್ಯೆಗೆ ಯಂತ್ರವನ್ನೇ ಆವಿಷ್ಕರಿಸಲಾಗಿದೆ. ಹೌದು, ಸ್ವಿಟ್ಜರ್ಲೆಂಡ್ ಇಂತಹ ಯಂತ್ರವೊಂದನ್ನು ಆವಿಷ್ಕರಿಸಿದೆ. ಈ ಯಂತ್ರದ ಸಹಾಯದಿಂದ ಒಂದೇ ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದಂತೆ. ಶೀಘ್ರದಲ್ಲೇ ಇದು ಮಾರುಕಟ್ಟೆಗೆ ಬರುವ ಸಾಧ್ಯತೆ…
6 ತಿಂಗಳು ಯುದ್ಧದಲ್ಲಿ ಭಾಗಿ, 21 ತಿಂಗಳು ವೈದ್ಯಕೀಯ ಉಪಚಾರ. ಒಟ್ಟು 27 ತಿಂಗಳು ಸೇನೆಯಲ್ಲಿ ನನ್ನ ಸೇವೆ. ಎಲ್ಲರೂ ಇದನ್ನು ದುರದೃಷ್ಟ ಅಂತ ಹೇಳ್ತಾರೆ. ಪರ್ಮನೆಂಟ್ ಕಮೀಷನ್ ಆಯ್ಕೆ ಮಾಡಿಕೊಂಡ ನಾನು, ಕೆಲವು ತಿಂಗಳುಗಳಷ್ಟೇ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಕಿತು ಎನ್ನುವುದು ಅವರ ವಾದ. ಆದರೆ ನನಗೆ ಹಾಗೇ ಅನ್ನಿಸಲೇ ಇಲ್ಲ. ಕಾರಣವೂ ಇದೆ. 1970ರ ಯುದ್ಧದ ಬಳಿಕ ಮತ್ತೊಂದು ಯುದ್ಧ ನಡೆದದ್ದು 1999ರಲ್ಲಿ. ಅದು ಕಾರ್ಗಿಲ್ ಯುದ್ಧ. ಇದೇ ಹೊತ್ತಿಗೆ ನಾನು ಸೇನೆಗೆ ಸೇರಿಕೊಂಡೆ. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಎಂತಾ ಅದೃಷ್ಟ ನೋಡಿ.
1999 ರ ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು 60 ದಿನಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ಅಭೂತಪೂರ್ವ ವಿಜಯವನ್ನು ಸಾಧಿಸಿತ್ತು. ಇದೀಗ 1999 ಜೂನ್ 24 ರಂದು ಭಾರತೀಯ ವಾಯಪಡೆ ಟೈಗರ್ ಹಿಲ್ ಮೇಲಿದ್ದ ಪಾಕಿಸ್ತಾನಿ ಸೇನಾ ಶಿಬಿರದ ಮೇಲೆ ಲೇಸರ್ ಬಾಂಬ್ ದಾಳಿ ನಡೆಸಿದ ರೋಮಾಂಚನಕಾರಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಹಾಡಹಗಲೇ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಅಪಹರಣ (Kidnap case ) ಆಗಿತ್ತು. ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಬಸ್‌ಗಾಗಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಅಪಹರಣಕೋರರು ಅಪಹರಿಸಿದ್ದಾರೆ.
ಪ್ರೇಯಸಿ ಜತೆ ಇರುವಾಗಲೇ ಹೆಡ್ಕಾನ್ಸ್ಟೇಬಲ್ ಪತ್ನಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಿರವಾರ ಠಾಣೆ ಹೆಡ್ ಕಾನ್ಸಟೇಬಲ್ ರಾಜ್ ಮಹಮ್ಮದ್‌ನ ಅಕ್ರಮ ಸಂಬಂಧ ಹೊರಗೆ ಬಂದಿದ್ದು, ಪತ್ನಿಯೇ ಇಬ್ಬರನ್ನೂ ರೆಡ್ ಹ್ಯಾಂಡ್ ಹಿಡಿದು ಪೊಲೀಸರಿಗೆ ವಶಕ್ಕೆ ನೀಡಿದ್ದಾರೆ.
ಮೂಲತಃ ಶಿರಸಿಯ ದಾಸನಕೊಪ್ಪ ನಿವಾಸಿ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ವಾಸ್ತವ್ಯ ಹೊಂದಿರುವ ಶಿವಾನಂದಪ್ಪ ಬಿ. ಬಂಕೋಳ್ಳಿ (84 ವ.) ಅವರು ಜುಲೈ 22ರಂದು ಸಂಜೆ ಕಲ್ಲರ್ಪೆಯ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ನಗರದ ದಿ ಇಂಟರ್ ನ್ಯಾಷನಲ್ ಸ್ಕೂಲ್, ಬೆಂಗಳೂರು (ಟಿಐಎಸ್‌ಬಿ) ಇಲ್ಲಿನ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ಪೊಲವರಪು ಸಾದ್ಯ ಅವರು ಜೂನ್ 23 ರಂದು ಅಮೆರಿಕಾದ ನ್ಯೂಯಾರ್ಕ್‌ನ ಕಾರ್ನೆಗೀ ಸಭಾಂಗಣದಲ್ಲಿ ತಮ್ಮ ಸಂಗೀತ ಪ್ರದರ್ಶನ ನೀಡುತ್ತಿದ್ದಾರೆ.
ಮಂಗಳೂರು ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಕಾರಾಗೃಹಕ್ಕೆ ಗುರುವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ಅಯುಕ್ತ ಅನುಪಮ್ ಅಗ್ರವಾಲ್ ಆದೇಶದಂತೆ ಇಂದು ಮುಂಜಾವ ಸುಮಾರು 4 ಗಂಟೆಗೆ ದಾಳಿ ನಡೆಸಿದ ಪೊಲೀಸರು ತಪಾಸಣೆ ನಡೆಸಿದರು.
ವಿಟ್ಲದ ನೆತ್ರಕೆರೆ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಮತ್ತು ಗ್ಯಾಸ್ ಹಂಡೆ, ರೆಗ್ಯುಲೇಟರ್ ಇತ್ಯಾದಿಗಳನ್ನು ಕಳವುಗೈಯಲಾಗಿದೆ.