ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಪುತ್ತೂರು ವತಿಯಿಂದ ನೀಟ್ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ & ಮರುಪರೀಕ್ಷೆಗೆ ಆಗ್ರಹಿಸಿ NSUI ಅಧ್ಯಕ್ಷರಾದ ಎಡ್ವರ್ಡ್ ಪುತ್ತೂರು ರವರ ನೇತೃತ್ವದಲ್ಲಿ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.
Month: July 2024
ನಗರದ ಬಾರ್ ಮಾಲಕರೊಬ್ಬರ ಮನೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಬಾರ್ ಮಾಲಕ ಸಾವನ್ನಪ್ಪಿ ಅವರ ಪತ್ನಿ ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಕೊರಗಜ್ಜ ದೈವದ ಆದಿಸ್ಥಳವಾದ ಕುತ್ತಾರು ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಪ್ (katrina Kaif) ಸೇರಿದಂತೆ ಸುನೀಲ್ ಶೆಟ್ಟಿ (sunil Shetty) ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ, ಹಾಗೂ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ (KL Rahul) ಭೇಟಿ ನೀಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಮತ್ತು ಕುಂಜೂರುಪಂಜ ಒಕ್ಕೂಟ ಇದರ ಆಶ್ರಯದಲ್ಲಿ ಒಕ್ಕೂಟ ಸಭೆಯೊಂದಿಗೆ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ ನಡೆಯಿತು.
ಭಾರೀ ಮಳೆ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಗಲು ಹೊತ್ತಿನಲ್ಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಇರಾ ಗ್ರಾಮದ ಕಿನ್ನಿಮಜಲು ಎಂಬಲ್ಲಿ ಶನಿವಾರ ನಡೆದಿದೆ.
ಕೊಡಿಪ್ಪಾಡಿ ಗ್ರಾಮದ ಬಹುತೇಕ ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದ್ದು ಸುಮಾರು ಸಾವಿರಾರು ಅಡಿಕೆ ಮರಗಳು ನಾಶವಾಗಿದೆ. ಇದರಿಂದ ಕೃಷಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು ಸರಕಾರದಿಂದ ಸೂಕ್ತ ಔಷಧಿ ಮತ್ತು ಪರಿಹಾರಕ್ಕೆ ಆಗ್ರಹಿಸಿ ಕೊಡಿಪ್ಪಾಡಿ ಅಡಕೆ ಕೃಷಿಕರ ನಿಯೋಗ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕುದ್ರೋಳಿ ಕಂಡತ್ತಪಳ್ಳಿ ಎಂಬಲ್ಲಿನ ಗೋದಾಮಿನಲ್ಲಿ ಫ್ಲೈವುಡ್ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿರುವುದಾಗಿ ಬಂದರ್ ಪೊಲೀಸರು ತಿಳಿಸಿದ್ದಾರೆ.
ಫೈನಾನ್ಸ್ ಸೊಸೈಟಿಯೊಂದರಲ್ಲಿ ಬುರ್ಖಾ ಧರಿಸಿಕೊಂಡು ಬಂದು ಮಹಿಳೆ ಮೇಲೆ ಆ್ಯಸಿಡ್ ಹಾಕಿ ಚಿನ್ನಾಭರಣ ಸುಲಿಗೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಬಜಪೆ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ ನಿ. ಮಂಗಳೂರು ಇದರ ವಿಟ್ಲ ಶಾಖೆಯು 8 ವರ್ಷ ಪೂರೈಸಿದ್ದು, ಸಂಸ್ಥೆಯಲ್ಲಿ ಸಂಭ್ರಮ ಆಚರಿಸಲಾಯಿತು.