ಮಂಗಳೂರು: ಪಾರ್ಕ್ ಮಾಡಿದ್ದ ಕಾರಿನ ಗ್ಲಾಸ್ ಒಡೆದು ಕಾರಿನೊಳಗಿದ್ದ 6,80,000ರೂ. ಮೌಲ್ಯದ ಚಿನ್ನಾಭರಣ, ಮತ್ತು ಲ್ಯಾಪ್ ಟಾಪ್ ಇರುವ ವ್ಯಾನಿಟ್ ಬ್ಯಾಗ್ ಅನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೂರ್ವ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಕಳವು ಮಾಡಿದ ಸೊತ್ತನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರಿನ ಅಡ್ಯಾರು ಗ್ರಾಮದ ಪದವು, ಅಡ್ಯಾರ್, ಭರಿರತ್ ಮಂಜಿಲ್ ನಿವಾಸಿ ಅಬ್ದುಲ್ ಅಕ್ರಮ್(33) ಬಂಧಿತ ಆರೋಪಿ.
ಆರೋಪಿಯು ಡಿ. 8ರ ರಾತ್ರಿ ಕಂಕನಾಡಿ ಮಾರ್ಕೆಟ್ ಬಳಿ ಪಾರ್ಕ್ ಮಾಡಿದ್ದ ಕ್ರೇಟಾ ಕಾರಿನ ಗ್ಲಾಸ್ ಒಡೆದು ಕಾರಿನ ಒಳಗಡೆ ಇದ್ದ 6,80,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಲ್ಯಾಪ್ ಟಾಪ್ ಇರುವ ವ್ಯಾನಿಟ್ ಬ್ಯಾಗ್ ಅನ್ನು ಕಳ್ಳತನ ಮಾಡಿದ್ದಾನೆ.
ಬಳಿಕ ದೂರುದಾರರು ಬಂದು ನೋಡಿದಾಗ ಘಟನೆಯು ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.