ನವೆಂಬರ್ 6ರಂದು ತಡರಾತ್ರಿ ಪುತ್ತೂರಿನ
ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ 1 ಮತ್ತು 2ನೇ ಆರೋಪಿಗಳಾದ ಚೇತನ್ ಹಾಗೂ ಮನೀಷ್ ಇವರ ಅರ್ಜಿಯನ್ನು ಮಾನ್ಯ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಾದ ಪ್ರತಿದಾದ ನಡೆದು ಇದೀಗ ಮಾನ್ಯ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿ ಅರ್ಜಿಯನ್ನು ತಿರಸ್ಕೃತಗೊಳಿಸಿದೆ.