ಸ್ಥಳೀಯ

ತಾಲೂಕು ಮಟ್ಟದ ಕರಾಟೆ ಪಂದ್ಯಾಟ: ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಪುತ್ತೂರು: ಕರ್ನಾಟಕ ಸರಕಾರ ಕ್ಷೇತ್ರ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆ ಪುತ್ತೂರು ಇವರ ಸಹಯೋಗದಲ್ಲಿ ಆಗಸ್ಟ್ 5ರಂದು ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಕರಾಟೆ ಪಂದ್ಯಾಟದಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ಸ್ವರೂಪ್ ಕೃಷ್ಣ ಪ್ರಥಮ ಸ್ಥಾನ ಹಾಗೂ 9ನೇ ತರಗತಿಯ ರಿಶೋನ್ ಲಸ್ರಾದೋ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಸ್ವರೂಪ್ ಕೃಷ್ಣ ಅವರು ಕೃಷ್ಣ ಪ್ರಸಾದ್ ಮತ್ತು ಸೌಮ್ಯ ದಂಪತಿ ಪುತ್ರನಾಗಿದ್ದು, ಶಿವಪ್ರಸಾದ್ ಅವರ ಶಿಷ್ಯ.

SRK Ladders

ರಿಶೋನ್ ಲಸ್ರಾದೋ ಅವರು ರೋಶನ್ ಲಾಸ್ತಾದೋ ಮತ್ತು ಸುಶಾಂತಿ ದಂಪತಿ ಪುತ್ರನಾಗಿದ್ದು, ಸೆನ್ಸಾಯಿ ಮಾಧವ ಅಳಿಕೆ ಮತ್ತು ರೋಹಿತ್ ಎಸ್.ಎನ್ ಅವರ ಶಿಷ್ಯ.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ಹಾಗೂ ಮುಖ್ಯೋಪಾಧ್ಯಾಯಿನಿ ಭಗಿನಿ ಶಾಂತಿ ಆಗ್ನೆಸ್ ಬಿ.ಎಸ್ ಮಾರ್ಗದರ್ಶನ ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2