ರೋಟರಿ ವಲಯ 11ರ ವಲಯ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ರೋಟರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ.
ಶಟಲ್ ಬ್ಯಾಡ್ಮಿಂಟನ್ ನಲ್ಲಿ ಶ್ವೇತ ಮನೋಜ್ ಮತ್ತು ಕವಿತಾ ಅನಿಲ್ ಕುಮಾರ್ ಮೊದಲನೇ ಸ್ಥಾನವನ್ನು ರಿತೇಶ್ ಇವರು ಚೆಸ್ ನಲ್ಲಿ ಪ್ರಥಮ ಸ್ಥಾನ, ಡಾ.ಯು.ಕೆ.ನಂದಕಿಶೋರ್ ಹಾಗೂ ಪಾವನ ನಂದಕಿಶೋರ್ ಇವರು ಟೇಬಲ್ ಟೆನಿಸ್ ಆಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಹಗ್ಗ ಜಗ್ಗಾಟ, ಮತ್ತು ತ್ರೋಬಾಲ್ ನಲ್ಲಿ ಮಹಿಳೆಯರು “ಎರಡನೇ ಸ್ಥಾನವನ್ನು, ಷಟಲ್ ಬ್ಯಾಡ್ಮಿಂಟನ್ ನಲ್ಲಿ ಕವಿತಾ ಅನಿಲ್ ಕುಮಾರ್ ಎರಡನೇ ಸ್ಥಾನವನ್ನು ಪಡೆದಿದ್ದಾರೆ.
ತೀರ್ಥಹಳ್ಳಿ ರೋಟರಿ ಕ್ಲಬ್ಬಿನ ಸದಸ್ಯರಾದ ಕೆ.ಪಿ.ಎಸ್. ಸ್ವಾಮು, ಪಿ.ವಿ.ಭರತ್ ಕುಮಾರ್, ಮನೋಜ್ ಆಚಾರ್ಯ, ಡಾ. ನಂದಕಿಶೋರ್.ಯು. ಕೆ., ಕಾರ್ಯದರ್ಶಿ .ಎಂ ಎಸ್.ಶಿವಪ್ರಸಾದ್, ಮತ್ತು ಅಧ್ಯಕ್ಷ ಅನಿಲ್ ಕುಮಾರ್., ಶರತ್ ಚಂದ್ರ, ಶ್ವೇತಾ ಮನೋಜ್, ಕಾವ್ಯ ಶಿವಪ್ರಸಾದ್, ಪಾವನಾ ನಂದಕಿಶೋರ್, ಕವಿತಾ ಅನಿಲ್ ಕುಮಾರ್ ಸುಮತಿ ಭರತ್ ಹಾಗೂ ಆನೆಟ್ ವಿಭಾಗದಲ್ಲಿ ಸುಮುಖ ರಮೇಶ್, ರಿತೇಶ್ ಕುಮಾರ್ ಮತ್ತು ಚೇತನ್ ಕುಮಾರ್ ಇವರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.