ಪುಣಚ: ಗಂಡ ಹೆಂಡತಿ ಜಗಳದಲ್ಲಿ ಗಂಡ ಹೆಂಡತಿಯನ್ನು ದೂಡಿ ಹಾಕಿ ಗಂಭೀರ ಗಾಯಗೊಂಡು ಮಹಿಳೆ ಮೃತಪಟ್ಟ ಘಟನೆ ವಿಟ್ಲ ಸಮೀಪದ ಪುಣಚದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ದೇವಿನಗರ ನಿವಾಸಿ ಲೀಲಾ (45) ಎಂದು ಗುರುತಿಸಲಾಗಿದೆ.
ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತಿದ್ದ ಸಂಜೀವ ಮೊನ್ನೆ ಕೂಡ ಗಲಾಟೆ ಮಾಡಿ ಹೆಂಡತಿಯನ್ನು ದೂಡಿ ಹಾಕಿದ್ದಾನೆ ಎಂಬ ಮಾಹಿತಿ ಸಾರ್ವಜನಿಕರಿಂದ ತಿಳಿದು ಬಂದಿದೆ. ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಹಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೀಗ ನಿನ್ನೆ ಮುಂಜಾನೆ ಲೀಲಾರವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಂಗಳೂರು ವೆನ್ಸಾಕ್ ಆಸ್ಪತ್ರೆಗೆ ವಿಟ್ಲ ಪೋಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಮೊದಲಿಗೆ ಈ ಪ್ರಕರಣ ಸಹಜ ಸಾವಿನಂತಿದ್ದರೂ ಬಳಿಕ ಪೊಲೀಸ್ ತನಿಖೆಯಿಂದ ಇದು ಕೊಲೆ ಎಂದು ಸಾಬೀತಾಗಿದೆ. ಆರೋಪಿ ಸಂಜೀವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ