Share News

ಉಪ್ಪಿನಂಗಡಿ: ಸೈಬರ್ ವಂಚನಾ ಜಾಲದ ಮೂಲಕ ಹಣ ದೋಚುವ ವಂಚನೆಗೆ ಬಲಿಯಾದ ಉಪ್ಪಿನಂಗಡಿಯ ವ್ಯಕ್ತಿಯೋರ್ವರ ಮೊಬೈಲ್ ಗೆ   ಕರೆ  ಬಂದು  ಸ್ವೀಕರಿಸಿದ ಕೂಡಲೇ ಅವರ ಖಾತೆಯಲ್ಲಿದ್ದ ಹಣ ವರ್ಗಾವಣೆಗೆ ಒಳಗಾಗಿರುವ ಪ್ರಕರಣ ನಡೆದಿದೆ.

ಮಾಧ್ಯಮ ಪ್ರತಿನಿಧಿಯೋರ್ವರಿಗೆ ಗುರುವಾರ ಬೆಳಗ್ಗೆ ಫೋನ್ ಕರೆಯೊಂದು ಬಂದಿದ್ದು, ಕರೆಯನ್ನು ಸ್ವೀಕರಿಸಿದಾಗ ಯಾವುದೇ ಮಾತುಕತೆ ಮಾಡದೆ ಫೋನ್ ಕರೆ ಕಡಿತಗೊಂಡಿತ್ತು. ಈ ವೇಳೆ ಇದು ಯಾರ ನಂಬರ್ ಎಂದು ಅವರು ಟ್ರೂ ಕಾಲ‌ರ್ ಮೂಲಕ ಕರೆಯ ಮೂಲವನ್ನು ಶೋಧಿಸಿದಾಗ ಅಲ್ಲಿ ‘ಲೈಕ್‌ಲೀ ಫ್ರಾಡ್’ ಎಂಬುದು ಕಂಡು ಬಂದಿದೆ. ತಕ್ಷಣವೇ ವಂಚನೆಯ ಸಂಶಯಪಟ್ಟ ಅವರು ತನ್ನ ಫೋನ್‌ನ ಸಂದೇಶ ಪರಿಶೀಲಿಸಿದಾಗ ಆ ಫೋನ್ ನಂಬ‌ರ್ ಲಿಂಕ್ ಆಗಿದ್ದ ಐಪಿಪಿಬಿ ಖಾತೆಯಿಂದ 161 ರೂ. ಹಾಗೂ 14839 ರೂ. ಅಟೋ ಪೇ ಆಗಿದೆ ಎಂಬ ಸಂದೇಶ ಬಂದಿತ್ತು. ಕಳವಳಕ್ಕೀಡಾದ ಅವರು, ಐಪಿಪಿಬಿ ಖಾತೆಯ ಬಗ್ಗೆ ಇಲಾಖಾಧಿಕಾರಿಗಳಲ್ಲಿ ದೂರು ಸಲ್ಲಿಸಿದಾಗ ಸದ್ರಿ ಅಟೋ ಪೇ ಯವಿ 161 ರೂ. ವರ್ಗಾವಣೆಗೊಂಡಿದ್ದು, 14839 ರೂ. ಕ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ತಡೆಹಿಡಿಯಲ್ಪಟ್ಟಿದೆ ಎ ಮಾಹಿತಿ ದೊರಕಿತು. ಇದೇ ವೇಳೆ ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಅವರಿಗೆ ಬಂದಿದ್ದು, ಆ ವೇಳೆ ಜಾಗೃತ ಗೊಂಡಿದ್ದ ಪರಿಣಾಮ ಅವರು ಕರೆ ಸ್ವೀಕರಿಸಲಿಲ್ಲ ಎಂದು ತಿಳಿದು ಬಂದಿದೆ.

 


Share News

Comments are closed.

Exit mobile version