ಮುಂದಿನ ವರ್ಷದ (2025)ಜನವರಿ 13ರಿಂದ 19ರ ತನಕ ಹೊಸದಿಲ್ಲಿಯಲ್ಲಿ ನಡೆಯಲಿರುವ ಚೊಚ್ಚಲ ಖೋ ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ 24 ದೇಶಗಳು ಪಾಲ್ಗೊಳ್ಳುವುದು ದೃಢಪಟ್ಟಿದೆ ಎಂಬುದಾಗಿ ಖೋ ಖೋ ನ್ಯಾಶನಲ್ ಫೆಡರೇಶನ್ ಪ್ರಕಟಿಸಿದೆ.
ಇಂಗ್ಲೆಂಡ್, ಜರ್ಮನಿ, ನೆದರ್ಲೆಂಡ್ಸ್, ಬ್ರಝಿಲ್, ಪೋಲೆಂಡ್, ಉತ್ತರ ಅಮೆರಿಕ ಇವುಗಳಲ್ಲಿ ಪ್ರಮುಖವಾಗಿವೆ.
ಆಫ್ರಿಕಾ ನಾಡಿನಿಂದ ಘಾನಾ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ; ಏಷ್ಯಾದಿಂದ ಬಾಂಗ್ಲಾದೇಶ, ಭೂತಾನ್, ಇಂಡೋನೇಷ್ಯಾ, ಇರಾನ್, ಮಲೇಷ್ಯಾ, ನೇಪಾಲ, ಪಾಕಿಸ್ಥಾನ, ದಕ್ಷಿಣ ಕೊರಿಯಾ, ಶ್ರೀಲಂಕಾ ತಂಡಗಳು ಪಾಲ್ಗೊಳ್ಳಲಿವೆ. ಉಳಿದಂತೆ ಪೆರು, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ತಂಡ ಗಳೂ ಆಗಮಿಸಲಿವೆ. ಪುರುಷರ ಹಾಗೂ ವನಿತಾ ವಿಭಾಗ ಗಳೆರಡರಲ್ಲೂ ಸ್ಪರ್ಧೆ ಏರ್ಪಡಲಿದೆ.