ಕಾರ್ಕಳ: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಡಿ. 13 ರಂದು ಶುಕ್ರವಾರ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ಮುಟ್ಟುಪಾಡಿ ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26) ಮೃತ ದುರ್ದೈವಿ. ಪ್ರೀತಂ ಅವರು ಶುಕ್ರವಾರ ಮಂಡ್ಯದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಆಟವಾಡುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಪ್ರತಿಭಾನ್ವಿತ ಪ್ರೀತಂ ಅವರು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದು, ಹಂತಹಂತವಾಗಿ ಶ್ರಮವಹಿಸಿ ಕಬಡ್ಡಿ ಆಟಗಾರನಾಗಿ ಖ್ಯಾತಿ ಪಡೆದಿದ್ದರು. ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ