Friday, December 13
Share News

ಪುತ್ತೂರು: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ (ಐ) ಪುತ್ತೂರು ಸೆಂಟರ್ ವತಿಯಿಂದ  ರಾಮ್ಕೋ ಸಿಮೆಂಟ್ ಅರ್ಪಿಸುವ ಇಂಜಿನೀಯರ್ಸ್ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯ  ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಡಿ. 15ರಂದು ಬೆಳಿಗ್ಗೆ 9ರಿಂದ ನಡೆಯಲಿದೆ ಎಂದು ಸಂಯೋಜಕ ಸಮಿತಿ ಛೇರ್ ಮೆನ್ ನರಸಿಂಹ ಪೈ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಪಿ ಯತೀಶ್ ಎನ್. ಮುಖ್ಯ ಅತಿಥಿಯಾಗಿರುವರು. ಸಂಸದ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಸಯೋಜಕ ಸಮಿತಿ ಛೇರ್ ಮೆನ್ ನರಸಿಂಹ ಪೈ, ಜಿಲ್ಲಾ ಯುವಜನ ಕ್ರೀಡಾಧಿಕಾರಿ ಪ್ರದೀಪ್ ಡಿಸೋಜಾ ಅತಿಥಿಯಾಗಿರುವರು. ಇದೇ ಸಂದರ್ಭ ಯುವ ಕ್ರಿಕೆಟ್ ಸಾಧಕರಾದ ಅನಘಾ ಹಾಗೂ ಏಂಜಲೀಕಾ ಪಿಂಟೋ ಅವರನ್ನು ಸನ್ಮಾನಿಸಲಾಗುವುದು ಎಂದರು.

ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 30,000/ ರೂ. ನಗದು, ದ್ವಿತೀಯ ಬಹುಮಾನವಾಗಿ 20,000/ ರೂ. ಹಾಗೂ ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಟ್ರೋಫಿ ನೀಡಲಾಗುವುದು. ಒಟ್ಟು ಎಂಟು ತಂಡಗಳು ಪಂದ್ಯದಲ್ಲಿ ಭಾಗವಹಿಸುತ್ತಿದ್ದು, ಇಂಜಿನಿಯರ್ ಅಸೋಸಿಯೇಷನ್”ನ ಪುತ್ತೂರಿನ ಎರಡು ತಂಡ, ಉಳಿದಂತೆ ಬೆಳ್ತಂಗಡಿ, ಮಂಗಳೂರು, ಕಾರ್ಕಳ, ಮೂಲ್ಕಿ, ಸುಳ್ಯ, ಉಡುಪಿಯ ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.

ಸಂಜೆ 5 ಗಂಟೆಗೆ ನಡೆಯುವ ಸಮಾರೋಪದಲ್ಲಿ ಎಸಿಸಿಇ(ಐ) ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ, ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಎ. ರಾಜೇಶ್ ರೈ, ರಾಮ್ಕೋ ಸಿಮೆಂಟಿನ ತಾಂತ್ರಿಕ ಸೇವೆಯ ಡಿಜಿಎಂ ಸೂರಜ್ ಕುಮಾರ್ ಎ‌, ಮುಗ್ರೋಡಿ ಕನ್ ಸ್ಟ್ರಕ್ಷನಿನ ಸ್ಥಾಪಕ ಸುಧಾಕರ ಶೆಟ್ಟಿ, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ಸ್ಥಾಪಕ ಕೆ. ಮೋಹನ್ ಕುಮಾರ್, ಉಪ್ಪಿನಂಗಡಿ ಆದಿತ್ಯ ಎಂಟರ್ ಪ್ರೈಸಸ್ ನ ತ್ರಿವಿಕ್ರಮ ಇ. ಅತಿಥಿಯಾಗಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸಿಸಿಇ(ಐ) ಪುತ್ತೂರು ಸೆಂಟರ್ ಛೇರ್ ಮೆನ್ ಪ್ರಮೋದ್ ಕುಮಾರ್, ವೆಂಕಟ್ರಮಣ್, ರಕ್ಷಿತ್, ರಾಜಶೇಖರ್ ಉಪಸ್ಥಿತರಿದ್ದರು.


Share News

Comments are closed.

Exit mobile version