All News

ನಾಳೆ ಪುತ್ತೂರಿನ ಕಲಾದೀಪ ದಂಪತಿಯಿಂದ ನೃತ್ಯೋತ್ಕ್ರಮಣ | ಮಹಾಲಿಂಗೇಶ್ವರ ದೇವರಿಗೆ ಮೊದಲ ಬಾರಿಗೆ ಕನ್ನಡದಲ್ಲಿ ಪದವರ್ಣ

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ "ನೃತ್ಯೋತ್ಕ್ರಮಣ-2024" ಅ.17 ಗುರುವಾರ ಸಂಜೆ 5.30 ರಿಂದ ಪುತ್ತೂರು ಪುರಭವನದಲ್ಲಿ ನಡೆಯಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ದರ್ಬೆಯ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ “ನೃತ್ಯೋತ್ಕ್ರಮಣ-2024” ಅ.17 ಗುರುವಾರ ಸಂಜೆ 5.30 ರಿಂದ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾ‌ರ್ ತಿಳಿಸಿದ್ದಾರೆ.

SRK Ladders

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ್ ಕುಮಾರ್ ದೀಪ ಪ್ರಜ್ವಲನೆ ಮಾಡುವರು. ಮುಖ್ಯ ಅತಿಥಿಯಾಗಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಳಿಕ ನೃತ್ಯ- ಕಲಾದೀಪ ನೃತ್ಯ ದಂಪತಿಯಾದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಅವರಿಂದ “ನೃತ್ಯೋತ್ಕ್ರಮಣ” ನೃತ್ಯ ಪ್ರದರ್ಶನಗೊಳ್ಳಲಿದೆ. ನಾಟ್ಯ ಪ್ರದರ್ಶನದಲ್ಲಿ ವಿಶೇಷವಾಗಿ ಸುಮಂಗಲಾ ರತ್ನಾಕರ ಮಂಗಳೂರು ಅವರು ಕನ್ನಡದಲ್ಲಿ ರಚಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಕುರಿತ ಪದವರ್ಣ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವರನ್ನು ಭಕ್ತಿಯಿಂದ ಆರಾಧಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ಅನೇಕ ಸ್ತುತಿಗಳಿವೆ. ಆದರೆ ಇಲ್ಲಿನ ತನಕ ಕನ್ನಡದ ಪದವರ್ಣ ಆಗಿರಲಿಲ್ಲ. ಆದರೆ ಇದೀಗ ಕನ್ನಡದಲ್ಲೂ ಪದವರ್ಣದ ಮೂಲಕ ಶ್ರೀ ಮಹಾಲೀಂಗೇಶ್ವರ ದೇವರನ್ನು ಸ್ತುತಿಸುವ ಮೊದಲ ಪ್ರಯೋಗ ಪುತ್ತೂರಿನಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾದೀಪ ನೃತ್ಯ ದಂಪತಿಗಳು ನೃತ್ಯದ ಮೂಲಕ ಪ್ರದರ್ಶನ ನೀಡಲಿದ್ದಾರೆ. ಅ.17ರಂದು ಪುತ್ತೂರು ಪುರಭವನದಲ್ಲಿ ಸಂಜೆ ಗಂಟೆ 5.30 ರಿಂದ ನೃತ್ಯೋತ್ಕ್ರಮಣ ಕಾರ್ಯಕ್ರಮ ನಡೆಯಲಿದೆ.

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಅವರು ಜಂಟಿಯಾಗಿ ಮಾತನಾಡಿ ಪ್ರತಿ ವರ್ಷ ನೃತ್ಯೋತ್ಮಮಣ ಎಂಬ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಈ ವರ್ಷದ ನಾಳೆ ಪುತ್ತೂರಿನ ಕಲಾದೀಪ ದಂಪತಿಯಿಂದ ನೃತ್ಯೋತ್ಕ್ರಮಣ

ಮಹಾಲಿಂಗೇಶ್ವರ ದೇವರಿಗೆ ಮೊದಲ ಬಾರಿಗೆ ಕನ್ನಡದಲ್ಲಿ ಪದವರ್ಣ

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವರನ್ನು ಭಕ್ತಿಯಿಂದ ಆರಾಧಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ಅನೇಕ ಸ್ತುತಿಗಳಿವೆ. ಆದರೆ ಇಲ್ಲಿನ ತನಕ ಕನ್ನಡದ ಪದವರ್ಣ ಆಗಿರಲಿಲ್ಲ. ಆದರೆ ಇದೀಗ ಕನ್ನಡದಲ್ಲೂ ಪದವರ್ಣದ ಮೂಲಕ ಶ್ರೀ ಮಹಾಲೀಂಗೇಶ್ವರ ದೇವರನ್ನು ಸ್ತುತಿಸುವ ಮೊದಲ ಪ್ರಯೋಗ ಪುತ್ತೂರಿನಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾದೀಪ ನೃತ್ಯ ದಂಪತಿಗಳು ನೃತ್ಯದ ಮೂಲಕ ಪ್ರದರ್ಶನ ನೀಡಲಿದ್ದಾರೆ. ಅ.17ರಂದು ಪುತ್ತೂರು ಪುರಭವನದಲ್ಲಿ ಸಂಜೆ ಗಂಟೆ 5.30 ರಿಂದ ನೃತ್ಯೋತ್ಕ್ರಮಣ ಕಾರ್ಯಕ್ರಮ ನಡೆಯಲಿದೆ.

ವಿದುಷಿ ಪ್ರೀತಿಕಲಾ ಮಾತನಾಡಿ, ಪ್ರತಿ ವರ್ಷ ನೃತ್ಯೋತ್ಕ್ರಮಣ ಎಂಬ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಈ ವರ್ಷದ ನೃತ್ಯೋತ್ಮಮಣದಲ್ಲಿ ನಾವೇ ನೃತ್ಯ ಪ್ರದರ್ಶನ ನೀಡಲಿದ್ದೇವೆ. ಸುಮಾರು 12 ವರ್ಷಗಳ ಹಿಂದೆ ನಾವು ಹಿಮ್ಮೇಳನ ಸಹಿತವಾಗಿ ನಟರಾಜ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೆವು. ಈಗ ಮತ್ತೆ ನಾವು ನೃತ್ಯ ಪ್ರದರ್ಶನ ನೀಡಲಿದ್ದೇವೆ.

ಕಾರ್ಯಕ್ರಮವನ್ನು ನನ್ನ ಗುರುಗಳಾದ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಉಳ್ಳಾಲ ಮೋಹನ್ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ಹೇಳಿದರು.

ನೃತ್ಯಪದವರ್ಣ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮೇಲೆ ಕನ್ನಡದಲ್ಲಿ ಸ್ತುತಿಗಳಾಗಿವೆ. ಕನ್ನಡದಲ್ಲಿ ನೃತ್ಯಪದವರ್ಣ ಆಗಿರಲಿಲ್ಲ. ತಮಿಳು ಭಾಷೆಯಲ್ಲಿ ಚಿದಂಬರ, ಮಧುರೆ ಮೀನಾಕ್ಷಿ, ಕಾಮಾಕ್ಷಿ ರೂಪದಲ್ಲಿ ನೃತ್ಯ ಮಾಡುತ್ತೇವೆ. ನಮಗೊಂದು ಕನ್ನಡದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪದವರ್ಣ ಮಾಡಬೇಕೆಂಬ ಆಸೆಯಿತ್ತು. ಈ ಪದವರ್ಣವನ್ನು ಯಕ್ಷಗಾನ ಮತ್ತು ಭರತನಾಟ್ಯ ಕಲಾವಿದೆ ಮಂಗಳೂರಿನ ವಿದುಷಿ ಸುಮಂಗಲರತ್ನ ಅವರು ಕನ್ನಡದಲ್ಲಿ ಬರೆದು ಕೊಟ್ಟಿದ್ದರು. ಮಹಾಲಿಂಗೇಶ್ವರ ದೇವರ ಸ್ಥಳ ಪುರಾಣ ಕಥೆ, ಮಹಿಮೆಯ ಕುರಿತು ಇದರಲ್ಲಿದೆ. ಅದಕ್ಕೆ ನೃತ್ಯ ರೂಪಕವನ್ನು ನಾವು ಮಾಡಿದ್ದೇವೆ ಎಂದರು.

ರಾಗ ಸಂಯೋಜನೆಯನ್ನು ವಿದುಷಿ ಪ್ರೀತಿಕಲಾ ಅವರು ಮಾಡಿದ್ದಾರೆ. ಇದನ್ನು ಪ್ರಥಮ ಬಾರಿಗೆ ಪ್ರಸ್ತುತ ಪಡಿಸುತ್ತಿದ್ದೇವೆ ನೃತ್ಯೋತ್ಕ್ರಮಣದಲ್ಲಿ ನಾವೇ ನೃತ್ಯ ಪ್ರದರ್ಶನ ನೀಡಲಿದ್ದೇವೆ. ಸುಮಾರು 12 ವರ್ಷಗಳ ಹಿಂದೆ ನಾವು ಹಿಮ್ಮೇಳನ ಸಹಿತವಾಗಿ ನಟರಾಜ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೆವು. ಈಗ ಮತ್ತೆ ನಾವು ನೃತ್ಯ ಪ್ರದರ್ಶನ ನೀಡಲಿದ್ದೇವೆ ಎಂದು ದೀಪಕ್ ಕುಮಾರ್ ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts