Friday, December 13
Share News

ಪುತ್ತೂರು : ನವೆಂಬರ್ 6ರಂದು ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ 1 ಮತ್ತು 2ನೇ ಆರೋಪಿಗಳಾದ ಚೇತನ್ ಹಾಗೂ ಮನೀಷ್ ಇವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಾದ ಪ್ರತಿದಾದ ನಡೆದು ಇದೀಗ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿ ಅರ್ಜಿಯನ್ನು ತಿರಸ್ಕೃತಗೊಳಿಸಿದೆ.

ದೂರುದಾರರ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಗೊಂಡ ಪ್ರತಿಷ್ಠಿತ ಖ್ಯಾತ ನ್ಯಾಯವಾದಿಗಳಾದ ಮಹೇಶ್ ಕಜೆ ವಾದ ಮಂಡಿಸಿದ್ದರು.

ಜಾಮೀನು ನಿರಾಕರಣೆ ಪ್ರಮುಖ ಕಾರಣ.!!

1. ಕಲ್ಲೇಗ ಟೈಗರ್ಸ್ ಟೀಂನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಭೀಕರ ಕೊಲೆ ಪುತ್ತೂರಿಗರನ್ನು ಬೆಚ್ಚಿಬೀಳಿಸಿತ್ತು. ಅಕ್ಷಯ್ ಕಲ್ಲೇಗರ ಮೈಮೇಲೆ ಇದ್ದ 50 ಕ್ಕೂ ಹೆಚ್ಚು ಗಾಯದ ಗುರುತುಗಳು ಇದೊಂದು ಭೀಕರ ಕೊಲೆ ಪ್ರಕರಣ ಎಂಬುದನ್ನು ಎತ್ತಿ ತೋರಿಸುವಂತೆ ಇದೆ.

2. ಪೋಲೀಸರು ಕಲೆ ಹಾಕಿದ ಪ್ರಮುಖ ಸಾಕ್ಷಿಗಳು ಮಹತ್ವದ ಪಾತ್ರ ವಹಿಸಲಿದೆ. 55 ಸಾಕ್ಷಿಗಳು ಈ ಪ್ರಕರಣದಲ್ಲಿ ಇದ್ದು, ಸಮರ್ಥವಾದ ಸಾಕ್ಷ್ಯಾಧಾರಗಳು ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

3. ಪ್ರಮುಖ ಸಾಕ್ಷ್ಯಾಧಾರಗಳ ತನಿಖೆ ನಡೆಯುವ ತನಕ ಆರೋಪಿಗಳನ್ನು ಹೊರ ಬಿಡುವುದು ಸರಿಯಲ್ಲ, ಸಾಕ್ಷಿದಾರನ್ನು ಬೆದರಿಸುವ ಹಾಗೂ ಭಯಪಡಿಸುವ ಎಲ್ಲಾ ಸಾಧ್ಯತೆಗಳು ಇದೆ ಎಂಬುದು ಅವರ ಕೊಲೆ ಮಾಡಿದ ರೀತಿ, ಮತ್ತು ಕ್ರೌರ್ಯದಿಂದ ಕಂಡುಬರುತ್ತದೆ.


Share News

Comments are closed.

Exit mobile version