ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು 142ನೇ ಬೂತ್ ನ ನೂತನ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ ನ. 26ರಂದು ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇವಪ್ಪ ಗೌಡ ಓಲಾಡಿ ಇವರ ಮನೆಯಲ್ಲಿ ನಡೆಯಿತು.
ಬಿಜೆಪಿ ಪುತ್ತೂರು 142ನೇ ಬೂತ್ ಶಾಂತಿಗೋಡು ಇದರ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಲೆ, ಕಾರ್ಯದರ್ಶಿಯಾಗಿ ಗಣೇಶ್ ಪೇರಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಬೂತ್ ಸದಸ್ಯರಾಗಿ ಪ್ರವೀಣ್ ಕಲ್ಕಾರ್, ರೂಪ ಪರಕಮೆ, ಹರೀಶ್ ಕರ್ಬಡ್ಕ, ಪ್ರವೀಣ್ ಶೆಟ್ಟಿ ಕುದುರೆಪಾಡ್ಡಿ, ಅಕ್ಷಿತಾ, ರವೀಂದ್ರ ಕಲ್ಕಾರ್, ರುಕ್ಮಯ್ಯ ಕಕ್ವೆ, ಬಾಬು ಗೌಡ ಕೈಂದಾಡಿ, ಯುವರಾಜ್ ಪಜಿರೋಡಿ ಚಂಪಾವತಿ ಕರ್ಬಡ್ಕ, ಸತೀಶ್ ಪರಕಮೆ ಹರೀಶ್ ಕರ್ಬಡ್ಕ ಆಯ್ಕೆಯಾದರು.
ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶೋಧ ಗೌಡ ಪ್ರಭಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಕ್ತಿ ಕೇಂದ್ರ ಅಧ್ಯಕ್ಷ ವಿಶ್ವನಾಥ ಬಲ್ಯಾಯ, ನಿಕಟ ಪೂರ್ವ ಶಕ್ತಿ ಕೇಂದ್ರ ಅಧ್ಯಕ್ಷ ಶ್ಯಾಮ್ ಭಟ್ ಕೈಂದಾಡಿ, ಬೂತ್ ಮಾಜಿ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಕಾರ್ಯದರ್ಶಿ ದೇವರಾಜ್ ಕಲ್ಕಾರ್, ಶಿವಪ್ರಸಾದ್ ಕೈಂದಾಡಿ, ಹೋನ್ನಪ್ಪ ಗೌಡ ಕೈಂದಾಡಿ, ಪಕ್ಷದ ಹಿರಿಯ ಕಾರ್ಯಕರ್ತ ಬಾಲಕೃಷ್ಣ ಪ್ರಭು ಕಲ್ಕಾರ್, ಲೋಹಿತ್ ಕಲ್ಕಾರ್, ಆನಂದ ಗೌಡ ಕಲ್ಕಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.